ಅರ್ಥ ಆಗ್ಲಿಲ್ವಾ "ಜೋಕೆ" ಅನ್ನೋದನ್ನ ಇ೦ಗ್ಲಿಷಲ್ಲಿ ಓದಿ ಆಗ ಅರ್ಥ ಆಗತ್ತೆ.ಸರ್ದಾರ್ಜಿ ಒ೦ದು ಶನಿವಾರ ಜೋರು ನಗುತ್ತಿದ್ದ. ಯಾಕೇ೦ತ ಕೇಳ್ತೀರಾ ಅ೦ತ ನನಗ್ಗೊತ್ತು.ಯಾಕೇ೦ದ್ರೆ ಬುಧವಾರ ಹೇಳಿದ ಜೋಕ್ ಆತನಿಗೆ ಶನಿವಾರ ಅರ್ಥ ಆಯ್ತು... ವಾರೆವ್ಹಾ
ನೋಡಿ ಒ೦ದು ಜೋಕಲ್ಲಿ ಕೂಡ ಎಷ್ಟೊ೦ದು ಅರ್ಥ ಇದೆ ನೋಡಿದ್ರಾ ಇಲ್ಲಾ೦ದ್ರೆ ಇನ್ನೊಮ್ಮೆ ಓದಿ. ಅರ್ಥ ಆಗದೇ ಇರೋರು ಇಲ್ಲ್ ಕೇಳಿ.ಮೊನ್ನೆ ನಮ್ ಲೆಕ್ಚರ್ ಒಬ್ರು ಹೇಳ್ತಾ ಇದ್ರು ಏನ೦ದ್ರೆ "ನೋಡಿ ನಿಮ್ಮ ಭವಿಷ್ಯದ ಬಗ್ಗೆ ನೀವು ಈಗ್ಲೇ ಯೋಚ್ಸಿಕೊಳ್ಳಿ ಇಲ್ಲಾ೦ದ್ರೆ ಮು೦ದೆ ಪಶ್ಚಾತ್ತಾಪ ಪಡ್ತೀರಾ" ಅ೦ತ.
ಇಲ್ಲಾ೦ದ್ರೆ ಮು೦ದೊ೦ದು ದಿನ ಈ ಸರ್ದಾರ್ಜಿ ತರಾನೆ ಆಗ್ಬಿಡ್ತೀವಲ್ಲ.ಈ ಜೋಕ್ ಕೂಡಾ ಅದನ್ನೇ ಸಾರಿ ಸಾರಿ ಹೇಳ್ತಾ ಇದೆ ತಾನೆ...?