Sunday, September 13, 2009

ಹೀಗೊ೦ದು ಫಜೀತಿ...

ಸದ್ಯಕ್ಕೆ B.Scಯ ಕೊನೆಯ ಇನ್ನಿಂಗ್ಸ್‌ನಲ್ಲಿದ್ದೀನಿ .ಇದನ್ನು ಗ್ರಹಚಾರ ಅನ್ನಬೇಕೋ ಇಲ್ಲಾ ದುರದೃಷ್ಟ ಅಂತ ಹೇಳಬೇಕೋ ತಿಳಿಯುತ್ತಿಲ್ಲ . ಸ್ಪಷ್ಟವಾಗಿ ಕನ್ನಡದಲ್ಲಿ ಹೇಳುವುದಾದರೆ ಇದು ನಡೆದದ್ದು ಈ "ಅಧ್ಯಯನ ವರ್ಷದ " ಆರಂಭದಲ್ಲಿ . ಯಾಕೋ ನಮ್ಮ ಕ್ಲಾಸ್ ಒಂಥರಾ ಹಾಗೆ . ಹೇಗಂದ್ರೆ ಕ್ಲಾಸ್‍ನೊಳಗೆ ಯಾರು ಎಲ್ಲಿ ಬೇಕಾದರೂ (?) ಕೂತ್ಕೋ‍ಬಹುದು . ಆದ್ರೆ ಯಾಕೋ ಎಲ್ಲರೂ ತಾವು ಒಂದು ಕಡೆ ಕೂತಲ್ಲೇ ಏನೋ ಭಾವನಾತ್ಮಕ ಸಂಭಂಧ ಹೊಂದಿದ್ದಾರೆ ಅಂತ ಕೆಲವೊಮ್ಮೆ ಅನ್ನಿಸಿಬಿಡುವುದುಂಟು ..! ಯಾಕೆ ಇದನ್ನು ಹೇಳಿದೆ ಅಂತ ನಿಮಗೆ ಹೊಳೆದಿರಬೇಕು .


ಈಗ ವಿಷಯಕ್ಕೆ ಬರೋಣ . ನಾನು ಕೂಡ ಈ ಮೇಲೆ ಹೇಳಿದಂತೆ ಇದ್ದೆ ಅನ್ನೋಕೆ ಯಾಕೋ ಸರಿ ಕಾಣ್ತಾ ಇಲ್ಲ . ಕಳೆದ ಎರಡು ವರ್ಷಗಳಿಂದ ಖಾಯಂ ಆಗಿ ಮೊದಲನೇ ಬೆಂಚ್‍ನಲ್ಲಿ ಕೂತ್ಕೋತ್ತಿದ್ದೆ . ಈ ವರ್ಷದ ಆರಂಭದಲ್ಲಿ ನೋಡೋವಾಗ ಎದುರಿನಬೆಂಚ್ ಇಲ್ಲ...!? ಕೊನೆಗೆ ಕೊಟ್ಟ ಕೊನೆಯ ಬೆಂಚೇ ಗತಿಯಾಯಿತು . ಆದ್ರೂನು ಅಭ್ಯಾಸ ಬಲವೋ ಏನೋ ಎದುರಿನ ಬೆಂಚ್ ಕಡೆಗೆ ಒಂದು ಸೆಳೆತ . ಏನ್ ಮಾಡಲಿ ಯಾಕೋ ಇಕ್ಕಟ್ಟು . ಹೀಗೆ ಇರಬೇಕಾದ್ರೆ ಮಾಥ್ಸ್‌ಗೆ ಹೊಸ ಮೇಡಂ ಬಂದ್ರು.ನಾನು ಮೊದಲ ತರಗತಿಗೇ ಚಕ್ಕರ್. ಯಾಕೇಂತ ಕೇಳ್ಬೇಡಿ . ಮರುದಿನ ಲೀವ್ ಲೆಟರ್ ತೋರಿಸ್ಬೇಕಾದ್ರೆ ನನ್ನ ಹೆಸರು ತಿಳ್ಕೊಂಡ್ರು . ಹಾಗೆ ಕ್ಲಾಸ್‍ನಲ್ಲಿ  ಅವರಿಗೆ ತಿಳಿದವನು ಅಂತ ನಾನೊಬ್ಬನೇ ಆದೆ.

ಆ  ದಿನ ಕ್ಲಾಸ್‍ನಲ್ಲಿ ಪಾಠ ಮಾಡ್ಬೇಕಾದ್ರೆ ನನ್ನ ದೋಸ್ತ್ ಡೌಟ್ ಕೇಳು ಅ೦ದ.ಅದಕ್ಕೆ ನಾನು ತಿರುಗಿ ಹೇಳ್ಬೇಕಾದ್ರೆ ಮೇಡಂ ಕಣ್ಣಿಗೆ ಸಿಕ್ಕಿಬಿದ್ದೆ . ಮೊದಲೇ ಕೊನೆಯ ಬೆಂಚ್ , ಸರಿ ಎದ್ದು ನಿಲ್ಲೋಕೆ ಹೇಳಿದ್ರು . ಸರಿ "ಏನು ಅವಿನಾಶ್?" ಅಂತ ಕೇಳಿಯೇ ಬಿಟ್ರು . ಅದಕ್ಕೆ " Mam, my friend told me that you ask a doubt.But I was to tell him that, “It would be amazing that, the student from the last bench asks a doubt...!?” ಅಂತ ಹೇಳೋಕೆ ಹೊರಟೆ . ಆದ್ರೆ ಅನಿರೀಕ್ಷಿತವಾಗಿ ಸಿಕ್ಕಿಬಿದ್ದಿದ್ರಿಂದಲೋ ಏನೋ ಗಂಟಲಿಂದ ಯಾಕೋ ಸ್ವರವೇ ಹೊರಡಲಿಲ್ಲ . ಹಾಗೆ ಅವರಿಗೆ ನೋಟೆಡ್ ಆಗ್ಬಿಟ್ಟೆ . ಹಾಗೆ ಮುಂದೆ ನಾನೇನಾದ್ರೂ ತಂಟೆ ಮಾಡ್ತೀನೇನೋ ಅಂತ ನನ್ನೇ ನೋಡೋರು .

ಸರಿ.ಇಷ್ಟೆಲ್ಲಾ ಆಯ್ತು . ಇದು  ಕಳೆದು ಎರಡು ದಿನ ಅಗುವುದರಲ್ಲಿ ಎದುರಿಗೊಂದು ಬೆಂಚ್ ಬಂದು ಬಿತ್ತು . ಮೊದಲೇ ಇಕ್ಕಟ್ಟು . ಹಾಗಾಗಿ ನಾನು ಮತ್ತು ನನ್ನ ದೋಸ್ತ್ ಇಬ್ಬರೂ ಎದುರು ಕೂತ್ವಿ . ನೆಕ್ಸ್ಟ್ ಈ ಮೇಡಮ್‍ದು ಕ್ಲಾಸು . ಬರೋವಾಗ "ನಿಮ್ಮನ್ನು ಯಾರು ಎದುರು ಕೂತ್ಕೊಳ್ಳೋಕೆ ಹೇಳಿದ್ದು ?” ಅಂತ ಕೇಳಿ ಬಿಡಬೇಕೇ? ಇಡೀ ಕ್ಲಾಸ್‍ಗೆ ಕ್ಲಾಸೇ ನಕ್ಕುಬಿಡ್ತು...! ಜೀವನದಲ್ಲಿ ಇಂಥ ಫಜೀತಿ ಎದುರಾಯ್ತಲ್ಲ ಅಂತ ತಲೆ ಕೆಡಿಸ್ಕೋಳ್ಳೋಕೇನೂ ಹೋಗಿಲ್ಲ.... ಆದ್ರೂ ಯಾರಿಗೂ ಇಂಥ ಪರಿಸ್ಥಿತಿ ಬರಬಾರದಪ್ಪ ,ನೀವೇನಂತೀರಿ....?