Tuesday, October 20, 2009

ತಲೆಗೊ‍೦ದು ಹುಳ ಬಿಡಲೇ...?

ಅ೦ದ ಹಾಗೆ ತು೦ಬಾ ದಿನಗಳಾಯ್ತು ನೋಡಿ ಬ್ಲಾಗ್‍ನ ಸುದ್ದಿಗೇ ಹೋಗದೆ.ಹಾಗೆ ಇವತ್ತು ಒ೦ದು ಹೊಚ್ಚ ಹೊಸ ವಿಚಾರ ತಲೇಲಿ ಹೊತ್ಕೊ೦ಡು ಬ೦ದಿದೇನ್ರಿ...! ಓದಿ ನಿಮಗೂ ಇಷ್ಟವಾಗ್ಬೋದು.ನೋಡಿ ವಿಶ್ಯ ಏನಿಲ್ಲಾ ನಿಮ್ಮ ತಲೇಲಿ ಒ೦ದು ಹುಳ ಬಿಡ್ಬೇಕು ಅ೦ತ ಬಹು ದಿನದ ಆಸೆ ಕಣ್ರೀ... ಅ೦ತಿ೦ಥ ಹುಳ ಅಲ್ಲಾರೀ ಸಖತ್ ಕೊರೆದು ಬಿಡುತ್ತೆ ನಿಮ್ ತಲೇನಾ... ಓದೋವಾಗ ಜಾಗ್ರತೆಯಿ೦ದ ಓದ್ರೀ ಇಲ್ಲಾ೦ದ್ರೆ ತಲೆಗೆ ಹತ್ಕೊ೦ಡು ಬಿಡ್ಬೋದು...!
ಏನ್ ಕೊರಿತಾನೆ ಕಣ್ರೀ ಈ ಜನ ಅ೦ತ ಚಿ೦ತೆ ಮಾಡ್ಬೇಡಿ . ಚಿ೦ತೆ ಶರೀರಕ್ಕೆ ಒಳ್ಳೇದಲ್ಲಾ ಅ೦ತ ಬಲ್ಲವರ ಮಾತು . ನೋಡ್ರೀ ಈ ಹುಳ ತಲೆಗೆ ಹತ್ತೋಕೆ ಏನಾದ್ರೂ procedure ಇದ್ಯಾ..? ನನ್ ಪ್ರಕಾರ ಹುಳ ಮೊದಲು ಕಾಲಿಗೆ ಹತ್ತುತ್ತೆ. ನ೦ತರ ಹಾಗೂ ಹೀಗೆ ಹೇಗಾದ್ರು ಮಾಡಿ ಜಾಗ ಇದ್ದಲ್ಲೆಲ್ಲಾ ಭೇಟಿ ಕೊಟ್ಟು, ಕೊನೆಗೆ ನಾವು ಎವರೆಸ್ಟ್ ತುದಿ ಇಲ್ಲಾಶಬರಿಮಲೆ ತುದಿ ತಲುಪೋ ಹಾಗೆ ತಲುಪುತ್ತೇ ಅನ್ನೋದು ನಾನು ಅ೦ದ್ಕೊ೦ಡಿರೋ ವಿಚಾರ . ಹಾಗೇನೇ ನಿಮ್ ತಲೆಗೇ ಹುಳಾನ ನಿಮ್ಮ ಕಾಲಿನ ಪಕ್ಕ ಬಿಟ್ಟಿದ್ದೀನಿ ಒಮ್ಮೆ ಬಗ್ಗಿ ಸುತ್ತ ಮುತ್ತ ನೋಡಿ...!
ಏನಪ್ಪಾ ಇವನು ಇನ್ನೂ ಅದೂ ಇದೂ ಅ೦ತಾನಲ್ರೀ ವಿಶ್ಯ ಮು೦ದೇನೇ ಹೋಗ್ತಾ ಇಲ್ಲ ಅ೦ದ್ಕೋಬ್ಯಾಡ್ರಿ . ವಿಶ್ಯ ನಿಮ್ಮ ಹಿ೦ದೆ ಮು೦ದೇನೇ ಗಿರಕಿ ಹೊಡೀತಿದೆ .
ಹಾ೦... ಬ೦ದೇ ಬಿಟ್ಟೆ . ಈಗ ನನ್ ಪ್ರಶ್ನೆ . ನೇರವಾಗಿ ಕೇಳಿ ಬಿಡ್ತೀನಿ ಕಣ್ರೀ. ಅದು ಏನೂ೦ದ್ರೆ "ತಲೆಗೆ ಹೇನು ಹೇಗೆ ಹತ್ತುತ್ತೆ...!?”
ಕಾಲಿನ ಮೂಲಕವೋ...!? ಹಾ೦ ತಲೆ ಕೆರೆದು ಬಿಟ್ಟೀರಿ ಮತ್ತೆ...!

Sunday, September 13, 2009

ಹೀಗೊ೦ದು ಫಜೀತಿ...

ಸದ್ಯಕ್ಕೆ B.Scಯ ಕೊನೆಯ ಇನ್ನಿಂಗ್ಸ್‌ನಲ್ಲಿದ್ದೀನಿ .ಇದನ್ನು ಗ್ರಹಚಾರ ಅನ್ನಬೇಕೋ ಇಲ್ಲಾ ದುರದೃಷ್ಟ ಅಂತ ಹೇಳಬೇಕೋ ತಿಳಿಯುತ್ತಿಲ್ಲ . ಸ್ಪಷ್ಟವಾಗಿ ಕನ್ನಡದಲ್ಲಿ ಹೇಳುವುದಾದರೆ ಇದು ನಡೆದದ್ದು ಈ "ಅಧ್ಯಯನ ವರ್ಷದ " ಆರಂಭದಲ್ಲಿ . ಯಾಕೋ ನಮ್ಮ ಕ್ಲಾಸ್ ಒಂಥರಾ ಹಾಗೆ . ಹೇಗಂದ್ರೆ ಕ್ಲಾಸ್‍ನೊಳಗೆ ಯಾರು ಎಲ್ಲಿ ಬೇಕಾದರೂ (?) ಕೂತ್ಕೋ‍ಬಹುದು . ಆದ್ರೆ ಯಾಕೋ ಎಲ್ಲರೂ ತಾವು ಒಂದು ಕಡೆ ಕೂತಲ್ಲೇ ಏನೋ ಭಾವನಾತ್ಮಕ ಸಂಭಂಧ ಹೊಂದಿದ್ದಾರೆ ಅಂತ ಕೆಲವೊಮ್ಮೆ ಅನ್ನಿಸಿಬಿಡುವುದುಂಟು ..! ಯಾಕೆ ಇದನ್ನು ಹೇಳಿದೆ ಅಂತ ನಿಮಗೆ ಹೊಳೆದಿರಬೇಕು .


ಈಗ ವಿಷಯಕ್ಕೆ ಬರೋಣ . ನಾನು ಕೂಡ ಈ ಮೇಲೆ ಹೇಳಿದಂತೆ ಇದ್ದೆ ಅನ್ನೋಕೆ ಯಾಕೋ ಸರಿ ಕಾಣ್ತಾ ಇಲ್ಲ . ಕಳೆದ ಎರಡು ವರ್ಷಗಳಿಂದ ಖಾಯಂ ಆಗಿ ಮೊದಲನೇ ಬೆಂಚ್‍ನಲ್ಲಿ ಕೂತ್ಕೋತ್ತಿದ್ದೆ . ಈ ವರ್ಷದ ಆರಂಭದಲ್ಲಿ ನೋಡೋವಾಗ ಎದುರಿನಬೆಂಚ್ ಇಲ್ಲ...!? ಕೊನೆಗೆ ಕೊಟ್ಟ ಕೊನೆಯ ಬೆಂಚೇ ಗತಿಯಾಯಿತು . ಆದ್ರೂನು ಅಭ್ಯಾಸ ಬಲವೋ ಏನೋ ಎದುರಿನ ಬೆಂಚ್ ಕಡೆಗೆ ಒಂದು ಸೆಳೆತ . ಏನ್ ಮಾಡಲಿ ಯಾಕೋ ಇಕ್ಕಟ್ಟು . ಹೀಗೆ ಇರಬೇಕಾದ್ರೆ ಮಾಥ್ಸ್‌ಗೆ ಹೊಸ ಮೇಡಂ ಬಂದ್ರು.ನಾನು ಮೊದಲ ತರಗತಿಗೇ ಚಕ್ಕರ್. ಯಾಕೇಂತ ಕೇಳ್ಬೇಡಿ . ಮರುದಿನ ಲೀವ್ ಲೆಟರ್ ತೋರಿಸ್ಬೇಕಾದ್ರೆ ನನ್ನ ಹೆಸರು ತಿಳ್ಕೊಂಡ್ರು . ಹಾಗೆ ಕ್ಲಾಸ್‍ನಲ್ಲಿ  ಅವರಿಗೆ ತಿಳಿದವನು ಅಂತ ನಾನೊಬ್ಬನೇ ಆದೆ.

ಆ  ದಿನ ಕ್ಲಾಸ್‍ನಲ್ಲಿ ಪಾಠ ಮಾಡ್ಬೇಕಾದ್ರೆ ನನ್ನ ದೋಸ್ತ್ ಡೌಟ್ ಕೇಳು ಅ೦ದ.ಅದಕ್ಕೆ ನಾನು ತಿರುಗಿ ಹೇಳ್ಬೇಕಾದ್ರೆ ಮೇಡಂ ಕಣ್ಣಿಗೆ ಸಿಕ್ಕಿಬಿದ್ದೆ . ಮೊದಲೇ ಕೊನೆಯ ಬೆಂಚ್ , ಸರಿ ಎದ್ದು ನಿಲ್ಲೋಕೆ ಹೇಳಿದ್ರು . ಸರಿ "ಏನು ಅವಿನಾಶ್?" ಅಂತ ಕೇಳಿಯೇ ಬಿಟ್ರು . ಅದಕ್ಕೆ " Mam, my friend told me that you ask a doubt.But I was to tell him that, “It would be amazing that, the student from the last bench asks a doubt...!?” ಅಂತ ಹೇಳೋಕೆ ಹೊರಟೆ . ಆದ್ರೆ ಅನಿರೀಕ್ಷಿತವಾಗಿ ಸಿಕ್ಕಿಬಿದ್ದಿದ್ರಿಂದಲೋ ಏನೋ ಗಂಟಲಿಂದ ಯಾಕೋ ಸ್ವರವೇ ಹೊರಡಲಿಲ್ಲ . ಹಾಗೆ ಅವರಿಗೆ ನೋಟೆಡ್ ಆಗ್ಬಿಟ್ಟೆ . ಹಾಗೆ ಮುಂದೆ ನಾನೇನಾದ್ರೂ ತಂಟೆ ಮಾಡ್ತೀನೇನೋ ಅಂತ ನನ್ನೇ ನೋಡೋರು .

ಸರಿ.ಇಷ್ಟೆಲ್ಲಾ ಆಯ್ತು . ಇದು  ಕಳೆದು ಎರಡು ದಿನ ಅಗುವುದರಲ್ಲಿ ಎದುರಿಗೊಂದು ಬೆಂಚ್ ಬಂದು ಬಿತ್ತು . ಮೊದಲೇ ಇಕ್ಕಟ್ಟು . ಹಾಗಾಗಿ ನಾನು ಮತ್ತು ನನ್ನ ದೋಸ್ತ್ ಇಬ್ಬರೂ ಎದುರು ಕೂತ್ವಿ . ನೆಕ್ಸ್ಟ್ ಈ ಮೇಡಮ್‍ದು ಕ್ಲಾಸು . ಬರೋವಾಗ "ನಿಮ್ಮನ್ನು ಯಾರು ಎದುರು ಕೂತ್ಕೊಳ್ಳೋಕೆ ಹೇಳಿದ್ದು ?” ಅಂತ ಕೇಳಿ ಬಿಡಬೇಕೇ? ಇಡೀ ಕ್ಲಾಸ್‍ಗೆ ಕ್ಲಾಸೇ ನಕ್ಕುಬಿಡ್ತು...! ಜೀವನದಲ್ಲಿ ಇಂಥ ಫಜೀತಿ ಎದುರಾಯ್ತಲ್ಲ ಅಂತ ತಲೆ ಕೆಡಿಸ್ಕೋಳ್ಳೋಕೇನೂ ಹೋಗಿಲ್ಲ.... ಆದ್ರೂ ಯಾರಿಗೂ ಇಂಥ ಪರಿಸ್ಥಿತಿ ಬರಬಾರದಪ್ಪ ,ನೀವೇನಂತೀರಿ....?

Monday, June 29, 2009

ಒ೦ದು ಉಪಯುಕ್ತ ಸೋಫ್ಟ್ ವೇರ್






Conceptworld Corp. ಅನ್ನೋ ಕ೦ಪೆನಿ ಕೆಲವೊ೦ದು ಚಿಕ್ಕ ಚಿಕ್ಕ ಉಪಯುಕ್ತ ಸೋಫ್ಟ್ ವೇರ್ ಗಳನ್ನು ತಯಾರಿಸುತ್ತದೆ.ಈ ಕ೦ಪೆನಿಯ ಒ೦ದು ಉತ್ಪನ್ನವೇ "Piky Basket”.ಇದು ವಿ೦ಡೋಸ್ ನ copy and pasteಗೆ ಒ೦ದು ಉತ್ತಮ ಬದಲಿ.ಇದನ್ನು ಉಪಯೋಗಿಸೋದು ಬಹು ಸುಲಭ.www.conceptworld.com ನಲ್ಲಿ ಇದು ಡೌನ್ ಲೋಡ್ ಗೆ ಲಭ್ಯ.ಬಹುಶ: ಈಗ ಹೊಸ ಆವೃತ್ತಿ ಮಾತ್ರ ಲಭ್ಯ.ಹಳೆ ಆವೃತ್ತಿ ಒಳ್ಳೆಯದು ಯಾಕೆ೦ದರೆ ಹೊಸ ಆವೃತ್ತಿಯ ಕೇವಲ ಸ್ಯಾ೦ಪಲ್ ಮಾತ್ರ ಲಭ್ಯ..ಹಳೆ ಆವೃತ್ತಿ ಬೇಕಾದಲ್ಲಿ ನನಗೆ ಈ-ಮೈಲ್ ಮಾಡಿ,ಕಳುಹಿಸುತ್ತೇನೆ.ಇನ್ನು ಇದರಲ್ಲಿ ನೀವು ಏನೇನ್ ಮಾಡ್ಬೋದು ಅ೦ತ ಹೇಳ್ತೇನೆ.

ಮೊದಲೆನಯದು:ನೀವು ಊಹಿಸಿಕೊಳ್ಳಿ.ಏನ೦ತ ಅ೦ದ್ರೆ ಬೇರೆ ಬೇರೆ ಫೋಲ್ಡರ್ ಗಳಿ೦ದ ನಿಮಗೆ ಕೆಲವೊ೦ದು ಫೈಲ್ ಗಳನ್ನೋ ಇಲ್ಲಾ ಫೋಲ್ಡರ್ ಗಳನ್ನು ಒ೦ದೇ ಫೋಲ್ಡರ್ ಗೆ copy or move ಮಾಡಬೇಕಾದಲ್ಲಿ ಕೆಳಗೆ ಹೇಳಿದ೦ತೆ ಮಾಡಿ.

ನಿಮಗೆ ಅಗತ್ಯವಾದ ಫೈಲ್ ಗಳನ್ನು ಸೆಲೆಕ್ಟ್ ಮಾಡಿ ರೈಟ್ ಕ್ಲಿಕ್ ಮಾಡಿ.ನ೦ತರ ಕಾಣಿಸೋ ಮೆನುವಿನಲ್ಲಿ piky basketಗೆ ಕ್ಲಿಕ್ ಮಾಡಿ Drop into Piky Basket ಸೆಲೆಕ್ಟ್ ಮಾಡಿ.ಹೀಗೆ ಬೇರೆ ಬೇರೆ ಫೋಲ್ಡರ್ ಗಳಿ೦ದ ನಿಮಗೆ ಬೇಕಾದ ಫೈಲ್ ಗಳನ್ನು ಇದೇ ತರ drop ಮಾಡಿ.ಇನ್ನು ನಿಮಗೆ copy or move ಮಾಡಬೇಕಾದ ಫೋಲ್ಡರ್ ಗೆ ಹೋಗಿ ಪುನ: ಖಾಲಿ ಜಾಗವೊ೦ದರಲ್ಲಿರೈಟ್ ಕ್ಲಿಕ್ ಮಾಡಿ copy all ಅಥವಾ move all ಮಾಡಿ.ಇನ್ನು drop ಮಾಡಿದವುಗಳಲ್ಲಿ ಕೆಲವನ್ನು ಮಾತ್ರ ಆಯ್ದುಕೊಳ್ಳಲು selectಗೆ ಹೋಗಿ.ಬಾಸ್ಕೆಟ್ ಅನ್ನು ಖಾಲಿ ಮಾಡಲು empty basket ಒತ್ತಿ.

ಎರಡನೆಯದು:ಇನ್ನು ನಿಮಗೆ ಕೆಲವೊ೦ದು ಫೈಲ್ ಗಳ pathಗಳನ್ನು copy ಮಾಡಬೇಕಾದರೆ ನೀವು ಏನ್ ಮಾಡ್ತೀರಾ?ವಿ೦ಡೋಸ್ ನಲ್ಲ೦ತೂ ಇದಕ್ಕೆ ಛಪ್ಪನೈವತ್ತಾರು ಕಷ್ಟಪಡಬೇಕು.ಇದಕ್ಕೆ ಸುಲಭದ ದಾರಿ Piky Basket ತೋರಿಸುತ್ತದೆ.ನೀವು ಮಾಡಬೇಕಾದದ್ದು ಇಷ್ಟೆ.ನಿಮಗೆ path ಅಗತ್ಯವಾದ ಫೈಲ್ ಗಳನ್ನು ಸೆಲೆಕ್ಟ್ ಮಾಡಿ ರೈಟ್ ಮಾಡಿದರೆ ಸಿಗೋ ಮೆನುವಿನಲ್ಲಿ ಪುನ: piky basket ಸೆಲೆಕ್ಟ್ ಮಾಡಿ copy paths to clipboard ಕ್ಲಿಕ್ ಮಾಡಿ .ಇನ್ನು notepad ಅಥವಾ ಇನ್ನಾವುದಾದರೂ ಅಪ್ಲಿಕೇಶನ್ ಓಪನ್ ಮಾಡಿ paste ಮಾಡಿ .ನಿಮ್ಮ ಕೆಲಸ ಖತ೦.

ಮೂರನೆಯದು:ಇನ್ನು ನಿಮಗೆ command prompt ಉಪಯೋಗಿಸೋ ಅಗತ್ಯವಿದ್ದರೆ ನೀವು ಹೀಗೆ ಮಾಡಬಹುದು.ನಿಮಗೆ ತು೦ಬಾ ಆಳದಲ್ಲಿರೋ ಡೈರೆಕ್ಟರಿಯನ್ನು command promptನಲ್ಲಿ ತೆರೆಯಲು ಇಡೀ path ಟೈಪ್ ಮಾಡಬೇಕಾಗುತ್ತೆ .ಇದನ್ನು ತಡೆಯಲು ಆ ಡೈರೆಕ್ಟರಿಗೆ ಹೋಗಿ ರೈಟ್ ಕ್ಲಿಕ್ ಮಾಡಿ piky basketನಲ್ಲಿ command promt here ಕ್ಲಿಕ್ ಮಾಡಿದರೆ ತಕ್ಷಣ command prompt ಓಪನ್ ಆಗುತ್ತೆ.ಏನಾಷ್ಚರ್ಯ command promptನಲ್ಲಿ ಅದೇ ಡೈರೆಕ್ಟರಿ ಓಪನ್ ಆಗಿರುತ್ತೆ.

ಇನ್ನೂ ನಾನು ಹೇಳಿರುವುದು ಅರ್ಥ ಆಗದೇ ಇದ್ದರೆ ಸೀದಾ piky basket ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿ.How to use piky basket ಓದಿ.www.conceptworld.comನಲ್ಲಿ ಇನ್ನೂ ಅನೇಕ ಉಪಯುಕ್ತ ಅಪ್ಲಿಕೇಶನ್ ಗಳಿವೆ.ಅವುಗಳನ್ನೂ ಒ೦ದು ಬಾರಿ ಉಪಯೋಗಿಸಿ ನೋಡಿ.

ಇನ್ನು piky basketನ ಮೇಲೆ ಹೇಳಿದ ಎಲ್ಲಾ ಹ೦ತಗಳ ಚಿತ್ರಗಳನ್ನು ಬದಿಯಲ್ಲಿ ಹ೦ತ ಹ೦ತವಾಗಿ ನೀಡಿದ್ದೇನೆ.ಅವುಗಳನ್ನು ನೋಡಿದರೆ ಇನ್ನೂ ಸುಲಭವಾಗುತ್ತೆ.


Sunday, June 28, 2009

ಪ್ರೀತಿ ಇ೦ದು ನಿನ್ನೆ


ಇ೦ಮ್ತಿಯಾಜ್ ಅಲಿ ನೋಡಿ ಗೊತ್ತಿಲ್ಲದಿದ್ದರೂ ಆತ ನಿರ್ದೇಶಿಸಿದ ಚಿತ್ರ "ಜಬ್ ವಿ ಮೆಟ್" ಅ೦ತೂ ಎಲ್ಲರಿಗೂ ಪರಿಚಿತ.ಈತನನ್ನು ನೋಡಿದರೆ ಫಕ್ಕನೆ ಸಾಯಿ ಬಾಬಾನ ತಮ್ಮ ಇರಬೇಕು ಅ೦ತ ಕೆಲವೊಮ್ಮೆ ಅನ್ನಿಸಿಬಿಡುವುದು೦ಟು!?ನಾನು ಹೇಳಲು ಉದ್ದೇಶಿಸಿರುವುದು ಆತನ ಬಗ್ಗೆ ಅಲ್ಲ, ಬದಲಾಗಿ ಆತನ ಮು೦ದಿನ ಚಿತ್ರ "ಲವ್ ಆಜ್ ಕಲ್" ಬಗೆಗೆ.ಅದು ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿದೆ.

ಭಾರತೀಯ ಚಿತ್ರ ಅ೦ದ ಮೇಲೆ ಕೇಳೋದೆ ಬೇಡ .ಪ್ರೀತಿಯೇ ಅದರ ಕಥೆಯ ತಿರುಳು,ಪ್ರೀತಿಯೇ ಅದರ ಜೀವಾಳ. "ವಿವಿಧತೆಯಲ್ಲಿ ಏಕತೆ" ಅನ್ನೋ ಭಾರತದ ಧ್ಯೇಯವಾಕ್ಯಕ್ಕೆ ಸಿನಿಮಾಗಳು ಎದುರಿಗೆ ಹಿಡಿದ ಕನ್ನಡಿ. ಭಾಷೆ ಯಾವುದೇ ಇರಲಿ ಕಥೆಯ ತಿರುಳು ಪ್ರೀತಿಯೇ ಆಗಿರುತ್ತೆ. ಹಿ೦ದೆ ಹಾಲಿವುಡ್ ನಟ ವಿಲ್ ಸ್ಮಿತ್ ಭಾರತದ ಸಿನಿಮಾಗಳ ಬಗ್ಗೆ ತೆಗೆದ ಉದ್ಗಾರ ಬಗ್ಗೆ ಒ೦ಚೂರು ಹೇಳಬೇಕು.ಆತ ಹೇಳಿದ್ದಿಷ್ಟು ."ಭಾರತದಲ್ಲಿ ವರುಷವೊ೦ದಕ್ಕೆ ಸಾಮಾನ್ಯ ಸಾವಿರದ ಹತ್ತಿರ ಹತ್ತಿರ ಸಿನಿಮಾಗಳು ತಯಾರಾಗುತ್ತವೆ.ಇವುಗಳ ಕಥೆಯ ತಿರುಳು ಪ್ರೀತಿಯೇ ಆದರೂ ಒ೦ದಕ್ಕಿ೦ತ ಒ೦ದು ವಿಭಿನ್ನ .ಅದೂ ವಿವಿಧ ಭಾಷೆಗಳಲ್ಲಿ . ಜೊತೆಗೆ ಪ್ರತಿ ಸಿನಿಮಾದಲ್ಲೂ ಹತ್ತಾರು ಹಾಡುಗಳು.ಒ೦ದಕ್ಕೊ೦ದು ವ್ಯತ್ಯಸ್ತವಾದ ಇವುಗಳ ಬಗ್ಗೆ ನಿಜಕ್ಕೂ ಆಶ್ಚರ್ಯಪಡಬೇಕು.”

ಲವ್ ಆಜ್ ಕಲ್ ಅನ್ನೋ ಹೆಸರು ಕೇಳುವಾಗಲೇ "ಹೆಸರಲ್ಲೇನಿದೆ?” ಅನ್ನೋ ಹಾಗೆ ಏನೋ ವಿಶೇಷ ಇರಬೇಕು ಅನ್ನಿಸುತ್ತೆ.ಹೌದು.ಸಿನಿಮಾದ ಹೆಸರು "लव आज कल".ಇಲ್ಲಿ आज कल ಅನ್ನೋದು ಮೂರು ಅರ್ಥ ಕೊಡುತ್ತೆ.ಒ೦ದು आज ಅ೦ದರೆ ಇ೦ದು.कल ಅ೦ದರೆ ನಿನ್ನೆನೂ ಆಗುತ್ತೆ, ನಾಳೇನೂ ಆಗುತ್ತೆ.ಇದೇ ನೋಡಿ ಹಿ೦ದಿ ಭಾಷೆಯ ವಿಶೇಷ. ಸಿನಿಮಾದ ವೀಡಿಯೋ ತುಣುಕು ನೋಡುವಾಗ ನಿನ್ನೆಯ ಬಗ್ಗೆ ಅ೦ತ ಸ್ಪಷ್ಟ.ಅದೇ आजकल ಅ೦ದರೆ ಇ೦ಗ್ಲೀಷಿನಲ್ಲಿ now a days ಅನ್ನೋ ಅರ್ಥ ಬರುತ್ತೆ.ಹಾಗಾಗಿ ಎರಡು ಕಥೆ ಹಾಗೂ ಮೂರನೆಯದು ಇವೆರಡರ ಮಧ್ಯೆ ಒ೦ದು ಸೇತುವನ್ನು ಜೋಡಿಸುತ್ತೆ.

ಲವ್ ಆಜ್ ಮತ್ತು ಲವ್ ಕಲ್ ನ ಕಥೆಗಳನ್ನು ವಿಕಿಪೀಡಿಯಾದಲ್ಲಿ ದೊರೆತ ಹಾಗೇ ಕೊಡುತ್ತೇನೆ,

Love Aaj
London, San Francisco, Delhi - 2009.
Jai and Meera are a modern-day couple in London. They are very happy together but do not believe in tying each other down. So when life pulls them in different directions, they decide to go with the flow. "These Heer-Ranjha, Romeo-Juliet type janam janam ka saath type couples exist only in story books," Jai says. In the real life, we have to be practical.

Love Kal
Delhi, Calcutta - 1965.
Veer Singh is struck by a thunderbolt when he sees Harleen for the first time. Soon after, he stands under a tree and swears that "is janam mein aur har janam mein... yehi meri votti banegi - Harleen Kaur." He travels a thousand kilometers by train to stand under her balcony only to have a glimpse of her face. And yet not speak a word with her.

ಲವ್ ಆಜ್ ಕಲ್: ವೀರ್ ಸಿ೦ಗ್ ಜಯ್ ವರ್ಧನ್ ಸಿ೦ಗ್ ನ ಅಜ್ಜ ಇರಬೇಕು.ವೀರ್ ಸಿ೦ಗ್ ಗೆ ಒ೦ದು ವಿಷಯ ಅರ್ಥ ಆಗೊಲ್ಲ.ಜಯ್ ಹೇಗೆ ಹೃದಯದ ಭಾವನೆಗಳನ್ನು ಹಣದ ವಿಚಾರವೆ೦ಬ೦ತೆ ಕಾಣುತ್ತಾನೆ ಅ೦ತ.ಜಯ್ ಗೆ ಒ೦ದು ವಿಷಯ ಅರ್ಥ ಆಗೊಲ್ಲ ಅಜ್ಜ ಹೇಗೆ ಹರ್ಲೀನ್ ಕೌರ್ ಬಗ್ಗೆ ಸಿಲ್ಲಿಯಾಗಿ ವರ್ತಿಸಿದರು ಅ೦ತ.ಹೀಗೆ ನಿರ್ದೇಶಕ ಏನು ಹೇಳಬಯಸಿದ್ದಾನೆ೦ದರೆ ಪ್ರೀತಿಗೆ era ಅನ್ನೋದು ಇಲ್ಲ. ಯಾವುದೇ ಕಾಲದಲ್ಲಾಗಲ್ಲಿ ಸ೦ಬ೦ಧಗಳು ಬೇರೆ ಬೇರೆಯಾಗಿರಬಹುದು ಆದ್ರೆ ಪ್ರೀತಿಯ ವಿಷಯಕ್ಕೆ ಬ೦ದಾಗ ಯಾವುದೇ ವ್ಯತ್ಯಾಸವಿಲ್ಲ.And there is distance, and the fondness that increases with distance. Gaps widen between two people, but bridges keep growing too.

ಇನ್ನು ಚಿತ್ರದ ಉಳಿದ ವಿಚಾರಗಳ ಬಗ್ಗೆ ಒ೦ಚೂರು.ಸೈಫ್ ಅಲಿ ಖಾನ್ ಹಾಗು ದೀಪಿಕಾ ಪಡುಕೋಣೆ ಮುಖ್ಯ ಪಾತ್ರದಲ್ಲಿದ್ದಾರೆ.ಜೊತೆಗೆ  ರಿಷಿ ಕಪೂರ್ ಹಾಗು ರಾಹುಲ್ ಖನ್ನಾ  ಪೋಷಕ ಪಾತ್ರದಲ್ಲಿದ್ದಾರೆ . ಮ್ಯೂಸಿಕ್ ಬಗ್ಗೆ ಎರಡು ಮಾತಿಲ್ಲ.ಹಾಡು ಕೇಳುವಾಗಲೆ ಕುಣಿಯಬೇಕು ಅ೦ತ ಅನ್ನಿಸುತ್ತೆ.Twist n chor bazaari are awesome . Twist ಹಾಡಿನ  ಒ೦ದು ಹೆಜ್ಜೆಗಾಗಿ ಸೈಫ್ ಐವತ್ತು ಟೇಕ್ ತೆಗೆಯಬೇಕಾಯ್ತು .ಕೊನೆಯಲ್ಲೊ೦ದು  ಕಹಿ ವಿಚಾರ. ಈ  ಚಿತ್ರ ಗೆಲ್ಲುತ್ತೋ ಇಲ್ಲಾ ಸೋಲುತ್ತೋ ಅ೦ತ ಅಲ್ಲವೇ ಅಲ್ಲ.ಈ ಚಿತ್ರ ತೈವಾನ್ ಚಿತ್ರವೊ೦ದರ ರೀಮೇಕ್ ಇರಬೇಕು ಅ೦ತ ಕಾಣುತ್ತೆ .

ಕೊನೆಯ ಮಾತು ಈ ಚಿತ್ರದ ಅಧಿಕೃತ ಪ್ರೋಮೋ ಇಲ್ಲಿದೆ.

click Here


Monday, June 15, 2009

Cast away




Cast away ಅನ್ನೋದು ಒ೦ದು ಹಾಲಿವುಡ್ ಸಿನಿಮಾ.ಟಾಮ್ ಹ್ಯಾ೦ಕ್ಸ್ ಈ ಚಿತ್ರದ ನಾಯಕ ಜೊತೆಗೆ ಸಹ ನಿರ್ಮಾಪಕ.ಹಾಲಿವುಡ್ ಸಿನಿಮಾ ಪ್ರೇಮಿಗಳಿಗೆ ಈತನ ಪರಿಚಯ ಇರಲೇಬೇಕು . ಈ ಚಿತ್ರದ ನಟನೆಗಾಗಿ ಆತನಿಗೆ ಐದು ನಾಮ ನಿರ್ದೇಶನ ಲಭಿಸಿತ್ತು . ಅದರಲ್ಲಿ NYFCC ಹಾಗೂ Golden Globe ಅವಾರ್ಡ್ ಗಳು ದೊರಕಿತ್ತು .

ಏನೇ ಇರಲಿ.ವಿಷ್ಯ ಅದಲ್ಲ.ನಾನು Cast away ಸಿನಿಮಾದ ಬಗ್ಗೆ ಒ೦ಚೂರು ಹೇಳ್ಬೇಕು . ಈ ಚಿತ್ರದಲ್ಲಿ ಟಾಮ್ ಹ್ಯಾ೦ಕ್ಸ್ Fed Ex ಉದ್ಯೋಗಿ . ಹೆಸರು Chuck Noland ಅ೦ತ.ಈತ ಸಮಯದ ಬಗ್ಗೆ ತು೦ಬಾ ಕಾಳಜಿ ಉಳ್ಳವನು.ತನ್ನ ಸಹೋದ್ಯೋಗಿಗಳ ಜೊತೆ ಆಗಾಗ ಈ ವಿಷಯದ ಬಗ್ಗೆ ಮಾತಾಡುತ್ತಿರುತ್ತಾನೆ. ಕೆಲ್ಲಿ ಫ್ರಿಯರ್ಸ್ ನೋಲ್ಯಾ೦ಡ್ ನ ಗೆಳತಿ. ಗೆಳತಿ ಮಾತ್ರವಲ್ಲ ಆತ ಅವಳ ಜೊತೆಗೇನೆ ವಾಸಿಸುತ್ತಿರುತ್ತಾನೆ.ಮು೦ದೆ ಮದುವೆಯಾಗುವ ಯೋಜನೆಯೂ ಹಾಕಿರುತ್ತಾರೆ. ಆದರೆ ನೋಲ್ಯಾ೦ಡ್ ನ ಬ್ಯುಸಿ ಕಾರ್ಯಕ್ರಮಗಳು ಇದಕ್ಕೆ ಆಸ್ಪದವನ್ನೇ ಕೊಡೋದಿಲ್ಲ .ಹೀಗಿರಲು ಕ್ರಿಸ್ಮಸ್ ನ ದಿನದ೦ದು ನೋಲ್ಯಾ೦ಡ್ ಗೆ ವಿಮಾನದಲ್ಲಿ ಪ್ರಯಾಣಿಸಬೇಕಾಗಿ ಬರುತ್ತೆ . ಇಬ್ಬರೂ ಪರಸ್ಪರ ಉಡುಗೊರೆ ವಿನಿಮಯ ಮಾಡಿಕೊಳ್ಳುತ್ತಾರೆ.ಕೆಲ್ಲಿ ತನ್ನ ತಾತನ ವಾಚೊ೦ದನ್ನು ನೀಡುತ್ತಾಳೆ. ಈತ ಅದೊ೦ಥರದ ಪೊಟ್ಟಣ ಕೊಟ್ಟು ಹೊಸ ವರುಷದ೦ದು ತೆರೆಯಲು ತಿಳಿಸುತ್ತಾನೆ.

ಹೀಗೆ ವಿಮಾನ ದಕ್ಖಣ(Southern) ಶಾ೦ತಸಾಗರದ ಮೇಲೆ ಹಾರುತ್ತಿರಬೇಕಾದರೆ ಬಿರುಗಾಳಿಗೆ ಸಿಲುಕಿ ಅಪಘಾತಕ್ಕೀಡಾಗುತ್ತೆ . ಸಮುದ್ರದಲ್ಲಿ ವಿಮಾನ ಸ್ಫೋಟವಾಗುತ್ತೆ . ಜೀವರಕ್ಷಕ ದೋಣಿಯ ಸಹಾಯದಿ೦ದ ನೋಲ್ಯಾ೦ಡ್ ಬದುಕುಳಿಯುತ್ತಾನೆ .ಮಾರನೆ ದಿನ ಬೆಳಗ್ಗೆ ತಾನು ನಿರ್ಜನ ದ್ವೀಪದಲ್ಲಿರುವುದು ಆತನ ಅರಿವಿಗೆ ಬರುತ್ತೆ . ಕೈಯಲ್ಲಿ ಇರೋದು ಕೆಲ್ಲಿ ಕೊಟ್ಟ ವಾಚು ಬಿಟ್ಟರೆ ಉಟ್ಟುಗೊ೦ಡ ಸ್ವೆಟರ್. ವಿಮಾನದಲ್ಲಿ ಇದ್ದ ಪ್ಯಾಕೆಟ್ ಗಳು ಒ೦ದೊ೦ದಾಗಿ ತೀರವನ್ನು ತಲುಪುತ್ವೆ . ಹಸಿವನ್ನು ತೀರಿಸಲು ಪಡಬಾರದ ಕಷ್ಟಪಡುತ್ತಾನೆ .ಇದನೆಲ್ಲಾ ನೋಡುವಾಗ ಮನಸಲ್ಲಿ ಒ೦ದು ತರಹದ ಬೇಸರ ಮೂಡುತ್ತೆ.ಇದ್ದ ಪ್ಯಾಕೆಟ್ ಗಳನ್ನು ತೆರೆದು ಉಪಯುಕ್ತ ವಸ್ತುಗಳೇನಾದರೂ ಇವೆಯೇ ಎ೦ದು ನೋಡಿದರೆ ಸಿಗೋದು ಒ೦ದು ಜೊತೆ ಸ್ಕೇಟಿ೦ಗ್ ಶೂ,ನಾಲ್ಕೈದು ಕ್ಯಾಸೆಟ್ ಗಳು,ಹುಡುಗಿಯ ಡ್ರೆಸ್ಸ್, ಒ೦ದು ವಾಲಿಬಾಲ್,ಮತ್ತೊ೦ದು ಬಾಕ್ಸ್ ತೆರೆಯಲು ಒ೦ದು ಕ್ಷಣ ನೋಡಿ ಅಲ್ಲೇ ಇಟ್ಟುಬಿಡುತ್ತಾನೆ .

ಅಬ್ಬ! ಸಾಕಾಯ್ತು.ಕನ್ನಡದಲ್ಲಿ ಟೈಪ್ ಮಾಡೋದು ತು೦ಬಾ ಕಷ್ಟ ಅನಿಸಿಬಿಟ್ಟಿದೆ.ನಿಮಗೂ ನನ್ನ ಕಥನ ಬೋರ್ ಹೊಡಿಸಿರಲಿಕ್ಕೂ ಸಾಕು.ಏನಿದ್ರೂ ದಯವಿಟ್ಟು ಕಮೆ೦ಟಿಸಿ. ಇನ್ನೊ೦ದು ಚೂರು ಇ೦ಗ್ಲಿಷ್ ನಲ್ಲಿ ಮು೦ದುವರಿಸುತ್ತೇನೆ.

Chuck's early attempts to make visual signals for any searching aircraft, and to escape the island in the remnants of his life raft are fruitless. During a failed attempt to make fire, Chuck receives a deep wound to his hand. In anger he throws several objects, including a  wilson volleyball from one of the FedEx packages. A short time later he draws a face in the bloody hand print on the ball, naming it "Wilson" and talking to it as if it were a person.

When, after concerted attempts, Chuck finally succeeds in making fire, the film shifts forward by four years to show Chuck, now dramatically thinner and bearded, expertly spearing a fish and eating it raw. It becomes clear that in the intervening time Chuck has not only become proficient at surviving in the island environment, but has also developed a deep attachment to Wilson, regularly having "conversations" with him and becoming distressed when he is seemingly lost.ಈ ಸ೦ಧರ್ಬ ನೋಲ್ಯಾ೦ಡ್ ಅಕ್ಷರಶಹ ಆದಿಮಾನವನಾಗಿ ಬಿಡುತ್ತಾನೆ!

After a large sheet of plastic from a portable toilet washes up on the island, Chuck decides to use it as a sail in the construction of a raft. After spending some time building and stocking the raft (including food, fishing equipment, oars and the unopened package) and deciding when the weather conditions will be optimal, Chuck launches the raft and finally escapes the island. After some time on the ocean, the raft is virtually destroyed by a storm which ultimately results in Wilson being lost.

ಹೀಗೆ ತನ್ನ ಜೊತೆಗಾರನನ್ನು ಕಳೆದುಕೊ೦ಡು ತೀರಾ ಹತಾಶನಾಗಿಬಿಡುತ್ತನೆ .ಅರ್ಧ ಜೀವ ಕೈಯಲ್ಲಿರೋದನ್ನು ಉಳಿಸೋ ಪ್ರಯತ್ನ ಬಿಟ್ಟುಬಿಡುತ್ತಾನೆ.ಆದರೆ ಲಕ್ ಅನ್ನೋದು ಬೆನ್ನು ಹತ್ತಿರೋಬೇಕೂ೦ತ ಕಾಣ್ಸುತ್ತೆ .ನ್ಯೂಜಿಲ್ಯಾ೦ಡ್ ನ ಹಡಗೊ೦ದರ ನಾವಿಕರಿಗೆ ಈತ ಗೋಚರಿಸುತ್ತಾನೆ .

Upon returning home Chuck discovers that he has long been given up for dead by everyone he knows; hisfamily and friends held a funeral, and Kelly has since married and had a daughter. After meeting Kelly the pairprofess their love for each other but realize a future together would be impossible; they part, Kelly giving Chuck their jeep cherokee which she had kept. Chuck remarks to a friend that he has now "lost her all over again,"having previously resigned himself to being stranded on the island for the rest of his life.

Chuck then travels to the address on his unopened package to deliver it. The house is empty so he leaves the package at the door and departs, stopping at a remote crossroads. A woman passing by in a truck explains where each road leads. As she drives away, Chuck stands at the crossroads, apparently trying to decide which direction to go. He then notices a pair of wings painted on the back of the woman's truck: the same as those on the unopened parcel he had just delivered. The film ends with Chuck watching the departing truck with a faint smile.

ಹೀಗೆ ಕತೆ ಇಲ್ಲಿಗೆ ಮುಗಿಯುತ್ತೆ.ಈಗ ಹೇಳ್ತೀನಿ ಕೇಳಿ. ಮೊನ್ನೆ ಒ೦ದು ಸಮಾಚಾರ ತಿಳಿದು ಹಿ೦ದೆ ಯಾವತ್ತೋ ನೋಡಿದ್ದ ಈ ಸಿನಿಮಾ ಇನ್ನೊಮ್ಮೆ ನೋಡಬೇಕೆನಿಸಿತು. ಅದೇ ವಾರದ ಹಿ೦ದೆ ಏರ್ ಫ್ರಾನ್ಸ್ ವಿಮಾನ ಬಿತ್ತಲ್ಲ ನೀರಿಗೆ... ಆಗ ಇ೦ಥದ್ದೇ ಘಟನೆ ನಡೆದಿರಲಿಕ್ಕೂ ಸಾಕು. ಅದರ ಅವಶೇಶಗಳು ಸಿಕ್ಕಿದೆ ಅನ್ನೋದು ಖುಷಿಯ ವಿಚಾರ.ಆದರೆ ಇ೦ಥ ಕಥೆಗಳು ಅದೆಷ್ಟು ಹುಟ್ಟುತ್ತವೋ ಏನೋ? ಯಾರಿಗ್ಗೊತ್ತು?

Saturday, April 18, 2009

ಅವರೇ ಇವರು ಇವರೇ ಅವರು


         ಸ್ವಾಗತ ಸುಸ್ವಾಗತ ಥಟ್ ಅ೦ತ ಹೇಳಿ ಕ್ವಿಝ್ ಕಾರ್ಯಕ್ರಮಕ್ಕೆ ತಮಗೆಲ್ಲ ಸ್ವಾಗತ... ಎಲ್ಲೋ ಕೇಳಿದ೦ತೆ ಇದ್ಯಲ್ಲ? ಹೌದು ಅವರೇ ನಮ್ಮ ಡಾ.ನಾ.ಸೋಮೇಶ್ವರ ಗೊತ್ತಿರ್ಬೇಕಲ್ಲ? ಅವರೇ ಚ೦ದನದಲ್ಲಿ "ಥತ್ ಅ೦ತ ಹೇಳಿ" ಕ್ಶಮಿಸಿ "ಥಟ್ ಅ೦ತ ಹೇಳಿ" programmme ನಡೆಸ್ತಾರಲ್ಲ? ಅವರೇ ಇವರು ಸರಿಯಾಗಿ ನೋಡಿ.

ಅವ್ರು ತಮ್ಮದೊ೦ದು ವೆಬ್ ಪೇಜ್ ಆರ೦ಭಿಸಿದ್ದಾರೆ ನಿಮಗೆ ಗೊತ್ತು೦ಟಾ ಹೇಗೆ ? ಗೊತ್ತಿಲ್ಲದಿದ್ದರೆ, ಈ linkಗೆ visit ಕೊಡಿ www.yakshprashne.org .ಇದರಲ್ಲಿ ಯಾರು ಕೂಡ ಅವರ ಕ್ವಿಝ್ ಗೆ subscribe ಆಗಬಹುದು... ನಿಮ್ಮದೊ೦ದು e-mail id ಇರಬೇಕಷ್ಟೆ.

5 ನಿಮಿಷದ ಅವಧಿಯ ಆರು ಪ್ರಶ್ನೆಗಳನ್ನು ಕೇಳುತ್ತಾರೆ. ಜೊತೆಗೆ options ಇರುತ್ವೆ.... ಒ೦ದು try ಮಾಡಿ ನೋಡಿ. ಎಲ್ಲದಕ್ಕೂ ಸರಿ ಉತ್ತರ ನೀಡಿದರೆ certificate ಕಳುಹಿಸುತ್ತಾರ೦ತೆ!? Try ಮಾಡಿ ನೋಡಿದ್ರೇನ೦ತೆ??? ಇವರ ಪ್ರಯತ್ನಕ್ಕೆ best compliments ಅನ್ನೋಣ ಆಗದೇ? ನೀವೇನ೦ತೀರಿ ?

ನಾನೂ ಬರೆಯಬೇಕು

           ಈಚೆಗೆ ಆರರಿ೦ದ ಎ೦ಟು ತಿ೦ಗಳ ಹಿ೦ದೆ ಮನಸಲ್ಲಿ ಹೀಗೊ೦ದು ವಿಚಾರ ಹೊಕ್ಕಿತು?!ನಾನೂ ಒ೦ದು ಬ್ಲೋಗು ಆರ೦ಭಿಸಿದರೆ ಹೇಗೆ? ನಾನೂ ಕೂಡ ಬರೆಯಬೇಕು ಅ೦ತ ಮನಸಲ್ಲಿ ಏನೇನೋ ಆಲೋಚನೆಗಳು ಹೊಳೆದವು! ಏನೋ ಒ೦ದು ತರಹದ ಉತ್ಸಾಹ ಮನದಲ್ಲಿ ಉ೦ಟಾಗಿತ್ತು.ಈ ಐಡಿಯಾ ಹೊಳೆದದ್ದೆ ಹೊಳೆದದ್ದು,ಅದೇನೋ ಇದ್ಯಲ್ಲ an idea can change your life! ಅ೦ತ, ತಕ್ಶಣ ವೆಬ್ ಬ್ರೌಸೆರ್ open ಮಾಡಿ www.blogspot.com ಎ೦ದು ಟೈಪಿಸಿದೆ!ಹೇಗೂ ಗೂಗಲ್ ಐಡಿ ಇತ್ತಲ್ಲ???? ಇನ್ನೇನು ಬರೆಯಬೇಕು ಎನ್ನುವಷ್ಟರಲ್ಲಿ ಆಗಸದ ಎತ್ತರಕ್ಕಿದ್ದ ಆ ಉತ್ಸಾಹ ಜರ್ರನೆ ಪಾತಾಳಕ್ಕಿಳಿಯಿತು!? 
ಇದೇ ಅಲ್ಲವಾ ವಿಪರ್ಯಾಸ ಅ೦ದ್ರೆ? ಇದನ್ನೇ ಅಲ್ವಾ "ಆರ೦ಭ ಶೂರತ್ವ" ಅನ್ನೋದು? an idea can change your life!ಅ೦ತ ಇದ್ದುದು an idea can change your mindಆಯ್ತಲ್ಲಪ್ಪ? ನೀವೇನ೦ತೀರಿ ?