Saturday, April 18, 2009

ನಾನೂ ಬರೆಯಬೇಕು

           ಈಚೆಗೆ ಆರರಿ೦ದ ಎ೦ಟು ತಿ೦ಗಳ ಹಿ೦ದೆ ಮನಸಲ್ಲಿ ಹೀಗೊ೦ದು ವಿಚಾರ ಹೊಕ್ಕಿತು?!ನಾನೂ ಒ೦ದು ಬ್ಲೋಗು ಆರ೦ಭಿಸಿದರೆ ಹೇಗೆ? ನಾನೂ ಕೂಡ ಬರೆಯಬೇಕು ಅ೦ತ ಮನಸಲ್ಲಿ ಏನೇನೋ ಆಲೋಚನೆಗಳು ಹೊಳೆದವು! ಏನೋ ಒ೦ದು ತರಹದ ಉತ್ಸಾಹ ಮನದಲ್ಲಿ ಉ೦ಟಾಗಿತ್ತು.ಈ ಐಡಿಯಾ ಹೊಳೆದದ್ದೆ ಹೊಳೆದದ್ದು,ಅದೇನೋ ಇದ್ಯಲ್ಲ an idea can change your life! ಅ೦ತ, ತಕ್ಶಣ ವೆಬ್ ಬ್ರೌಸೆರ್ open ಮಾಡಿ www.blogspot.com ಎ೦ದು ಟೈಪಿಸಿದೆ!ಹೇಗೂ ಗೂಗಲ್ ಐಡಿ ಇತ್ತಲ್ಲ???? ಇನ್ನೇನು ಬರೆಯಬೇಕು ಎನ್ನುವಷ್ಟರಲ್ಲಿ ಆಗಸದ ಎತ್ತರಕ್ಕಿದ್ದ ಆ ಉತ್ಸಾಹ ಜರ್ರನೆ ಪಾತಾಳಕ್ಕಿಳಿಯಿತು!? 
ಇದೇ ಅಲ್ಲವಾ ವಿಪರ್ಯಾಸ ಅ೦ದ್ರೆ? ಇದನ್ನೇ ಅಲ್ವಾ "ಆರ೦ಭ ಶೂರತ್ವ" ಅನ್ನೋದು? an idea can change your life!ಅ೦ತ ಇದ್ದುದು an idea can change your mindಆಯ್ತಲ್ಲಪ್ಪ? ನೀವೇನ೦ತೀರಿ ?  

No comments: