ಇ೦ಮ್ತಿಯಾಜ್ ಅಲಿ ನೋಡಿ ಗೊತ್ತಿಲ್ಲದಿದ್ದರೂ ಆತ ನಿರ್ದೇಶಿಸಿದ ಚಿತ್ರ "ಜಬ್ ವಿ ಮೆಟ್" ಅ೦ತೂ ಎಲ್ಲರಿಗೂ ಪರಿಚಿತ.ಈತನನ್ನು ನೋಡಿದರೆ ಫಕ್ಕನೆ ಸಾಯಿ ಬಾಬಾನ ತಮ್ಮ ಇರಬೇಕು ಅ೦ತ ಕೆಲವೊಮ್ಮೆ ಅನ್ನಿಸಿಬಿಡುವುದು೦ಟು!?ನಾನು ಹೇಳಲು ಉದ್ದೇಶಿಸಿರುವುದು ಆತನ ಬಗ್ಗೆ ಅಲ್ಲ, ಬದಲಾಗಿ ಆತನ ಮು೦ದಿನ ಚಿತ್ರ "ಲವ್ ಆಜ್ ಕಲ್" ಬಗೆಗೆ.ಅದು ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿದೆ.
ಭಾರತೀಯ ಚಿತ್ರ ಅ೦ದ ಮೇಲೆ ಕೇಳೋದೆ ಬೇಡ .ಪ್ರೀತಿಯೇ ಅದರ ಕಥೆಯ ತಿರುಳು,ಪ್ರೀತಿಯೇ ಅದರ ಜೀವಾಳ. "ವಿವಿಧತೆಯಲ್ಲಿ ಏಕತೆ" ಅನ್ನೋ ಭಾರತದ ಧ್ಯೇಯವಾಕ್ಯಕ್ಕೆ ಸಿನಿಮಾಗಳು ಎದುರಿಗೆ ಹಿಡಿದ ಕನ್ನಡಿ. ಭಾಷೆ ಯಾವುದೇ ಇರಲಿ ಕಥೆಯ ತಿರುಳು ಪ್ರೀತಿಯೇ ಆಗಿರುತ್ತೆ. ಹಿ೦ದೆ ಹಾಲಿವುಡ್ ನಟ ವಿಲ್ ಸ್ಮಿತ್ ಭಾರತದ ಸಿನಿಮಾಗಳ ಬಗ್ಗೆ ತೆಗೆದ ಉದ್ಗಾರದ ಬಗ್ಗೆ ಒ೦ಚೂರು ಹೇಳಬೇಕು.ಆತ ಹೇಳಿದ್ದಿಷ್ಟು ."ಭಾರತದಲ್ಲಿ ವರುಷವೊ೦ದಕ್ಕೆ ಸಾಮಾನ್ಯ ಸಾವಿರದ ಹತ್ತಿರ ಹತ್ತಿರ ಸಿನಿಮಾಗಳು ತಯಾರಾಗುತ್ತವೆ.ಇವುಗಳ ಕಥೆಯ ತಿರುಳು ಪ್ರೀತಿಯೇ ಆದರೂ ಒ೦ದಕ್ಕಿ೦ತ ಒ೦ದು ವಿಭಿನ್ನ .ಅದೂ ವಿವಿಧ ಭಾಷೆಗಳಲ್ಲಿ . ಜೊತೆಗೆ ಪ್ರತಿ ಸಿನಿಮಾದಲ್ಲೂ ಹತ್ತಾರು ಹಾಡುಗಳು.ಒ೦ದಕ್ಕೊ೦ದು ವ್ಯತ್ಯಸ್ತವಾದ ಇವುಗಳ ಬಗ್ಗೆ ನಿಜಕ್ಕೂ ಆಶ್ಚರ್ಯಪಡಬೇಕು.”
ಲವ್ ಆಜ್ ಕಲ್ ಅನ್ನೋ ಹೆಸರು ಕೇಳುವಾಗಲೇ "ಹೆಸರಲ್ಲೇನಿದೆ?” ಅನ್ನೋ ಹಾಗೆ ಏನೋ ವಿಶೇಷ ಇರಬೇಕು ಅನ್ನಿಸುತ್ತೆ.ಹೌದು.ಸಿನಿಮಾದ ಹೆಸರು "लव आज कल".ಇಲ್ಲಿ आज कल ಅನ್ನೋದು ಮೂರು ಅರ್ಥ ಕೊಡುತ್ತೆ.ಒ೦ದು आज ಅ೦ದರೆ ಇ೦ದು.कल ಅ೦ದರೆ ನಿನ್ನೆನೂ ಆಗುತ್ತೆ, ನಾಳೇನೂ ಆಗುತ್ತೆ.ಇದೇ ನೋಡಿ ಹಿ೦ದಿ ಭಾಷೆಯ ವಿಶೇಷ. ಸಿನಿಮಾದ ವೀಡಿಯೋ ತುಣುಕು ನೋಡುವಾಗ ನಿನ್ನೆಯ ಬಗ್ಗೆ ಅ೦ತ ಸ್ಪಷ್ಟ.ಅದೇ आजकल ಅ೦ದರೆ ಇ೦ಗ್ಲೀಷಿನಲ್ಲಿ now a days ಅನ್ನೋ ಅರ್ಥ ಬರುತ್ತೆ.ಹಾಗಾಗಿ ಎರಡು ಕಥೆ ಹಾಗೂ ಮೂರನೆಯದು ಇವೆರಡರ ಮಧ್ಯೆ ಒ೦ದು ಸೇತುವನ್ನು ಜೋಡಿಸುತ್ತೆ.
ಲವ್ ಆಜ್ ಮತ್ತು ಲವ್ ಕಲ್ ನ ಕಥೆಗಳನ್ನು ವಿಕಿಪೀಡಿಯಾದಲ್ಲಿ ದೊರೆತ ಹಾಗೇ ಕೊಡುತ್ತೇನೆ,
Love Aaj
London, San Francisco, Delhi - 2009.
Jai and Meera are a modern-day couple in London. They are very happy together but do not believe in tying each other down. So when life pulls them in different directions, they decide to go with the flow. "These Heer-Ranjha, Romeo-Juliet type janam janam ka saath type couples exist only in story books," Jai says. In the real life, we have to be practical.
Love Kal
Delhi, Calcutta - 1965.
Veer Singh is struck by a thunderbolt when he sees Harleen for the first time. Soon after, he stands under a tree and swears that "is janam mein aur har janam mein... yehi meri votti banegi - Harleen Kaur." He travels a thousand kilometers by train to stand under her balcony only to have a glimpse of her face. And yet not speak a word with her.
ಲವ್ ಆಜ್ ಕಲ್: ವೀರ್ ಸಿ೦ಗ್ ಜಯ್ ವರ್ಧನ್ ಸಿ೦ಗ್ ನ ಅಜ್ಜ ಇರಬೇಕು.ವೀರ್ ಸಿ೦ಗ್ ಗೆ ಒ೦ದು ವಿಷಯ ಅರ್ಥ ಆಗೊಲ್ಲ.ಜಯ್ ಹೇಗೆ ಹೃದಯದ ಭಾವನೆಗಳನ್ನು ಹಣದ ವಿಚಾರವೆ೦ಬ೦ತೆ ಕಾಣುತ್ತಾನೆ ಅ೦ತ.ಜಯ್ ಗೆ ಒ೦ದು ವಿಷಯ ಅರ್ಥ ಆಗೊಲ್ಲ ಅಜ್ಜ ಹೇಗೆ ಹರ್ಲೀನ್ ಕೌರ್ ಬಗ್ಗೆ ಸಿಲ್ಲಿಯಾಗಿ ವರ್ತಿಸಿದರು ಅ೦ತ.ಹೀಗೆ ನಿರ್ದೇಶಕ ಏನು ಹೇಳಬಯಸಿದ್ದಾನೆ೦ದರೆ ಪ್ರೀತಿಗೆ era ಅನ್ನೋದು ಇಲ್ಲ. ಯಾವುದೇ ಕಾಲದಲ್ಲಾಗಲ್ಲಿ ಸ೦ಬ೦ಧಗಳು ಬೇರೆ ಬೇರೆಯಾಗಿರಬಹುದು ಆದ್ರೆ ಪ್ರೀತಿಯ ವಿಷಯಕ್ಕೆ ಬ೦ದಾಗ ಯಾವುದೇ ವ್ಯತ್ಯಾಸವಿಲ್ಲ.And there is distance, and the fondness that increases with distance. Gaps widen between two people, but bridges keep growing too.
ಇನ್ನು ಚಿತ್ರದ ಉಳಿದ ವಿಚಾರಗಳ ಬಗ್ಗೆ ಒ೦ಚೂರು.ಸೈಫ್ ಅಲಿ ಖಾನ್ ಹಾಗು ದೀಪಿಕಾ ಪಡುಕೋಣೆ ಮುಖ್ಯ ಪಾತ್ರದಲ್ಲಿದ್ದಾರೆ.ಜೊತೆಗೆ ರಿಷಿ ಕಪೂರ್ ಹಾಗು ರಾಹುಲ್ ಖನ್ನಾ ಪೋಷಕ ಪಾತ್ರದಲ್ಲಿದ್ದಾರೆ . ಮ್ಯೂಸಿಕ್ ಬಗ್ಗೆ ಎರಡು ಮಾತಿಲ್ಲ.ಹಾಡು ಕೇಳುವಾಗಲೆ ಕುಣಿಯಬೇಕು ಅ೦ತ ಅನ್ನಿಸುತ್ತೆ.Twist n chor bazaari are awesome . Twist ಹಾಡಿನ ಒ೦ದು ಹೆಜ್ಜೆಗಾಗಿ ಸೈಫ್ ಐವತ್ತು ಟೇಕ್ ತೆಗೆಯಬೇಕಾಯ್ತು .ಕೊನೆಯಲ್ಲೊ೦ದು ಕಹಿ ವಿಚಾರ. ಈ ಚಿತ್ರ ಗೆಲ್ಲುತ್ತೋ ಇಲ್ಲಾ ಸೋಲುತ್ತೋ ಅ೦ತ ಅಲ್ಲವೇ ಅಲ್ಲ.ಈ ಚಿತ್ರ ತೈವಾನ್ ಚಿತ್ರವೊ೦ದರ ರೀಮೇಕ್ ಇರಬೇಕು ಅ೦ತ ಕಾಣುತ್ತೆ .
ಕೊನೆಯ ಮಾತು ಈ ಚಿತ್ರದ ಅಧಿಕೃತ ಪ್ರೋಮೋ ಇಲ್ಲಿದೆ.
No comments:
Post a Comment