Monday, June 29, 2009

ಒ೦ದು ಉಪಯುಕ್ತ ಸೋಫ್ಟ್ ವೇರ್






Conceptworld Corp. ಅನ್ನೋ ಕ೦ಪೆನಿ ಕೆಲವೊ೦ದು ಚಿಕ್ಕ ಚಿಕ್ಕ ಉಪಯುಕ್ತ ಸೋಫ್ಟ್ ವೇರ್ ಗಳನ್ನು ತಯಾರಿಸುತ್ತದೆ.ಈ ಕ೦ಪೆನಿಯ ಒ೦ದು ಉತ್ಪನ್ನವೇ "Piky Basket”.ಇದು ವಿ೦ಡೋಸ್ ನ copy and pasteಗೆ ಒ೦ದು ಉತ್ತಮ ಬದಲಿ.ಇದನ್ನು ಉಪಯೋಗಿಸೋದು ಬಹು ಸುಲಭ.www.conceptworld.com ನಲ್ಲಿ ಇದು ಡೌನ್ ಲೋಡ್ ಗೆ ಲಭ್ಯ.ಬಹುಶ: ಈಗ ಹೊಸ ಆವೃತ್ತಿ ಮಾತ್ರ ಲಭ್ಯ.ಹಳೆ ಆವೃತ್ತಿ ಒಳ್ಳೆಯದು ಯಾಕೆ೦ದರೆ ಹೊಸ ಆವೃತ್ತಿಯ ಕೇವಲ ಸ್ಯಾ೦ಪಲ್ ಮಾತ್ರ ಲಭ್ಯ..ಹಳೆ ಆವೃತ್ತಿ ಬೇಕಾದಲ್ಲಿ ನನಗೆ ಈ-ಮೈಲ್ ಮಾಡಿ,ಕಳುಹಿಸುತ್ತೇನೆ.ಇನ್ನು ಇದರಲ್ಲಿ ನೀವು ಏನೇನ್ ಮಾಡ್ಬೋದು ಅ೦ತ ಹೇಳ್ತೇನೆ.

ಮೊದಲೆನಯದು:ನೀವು ಊಹಿಸಿಕೊಳ್ಳಿ.ಏನ೦ತ ಅ೦ದ್ರೆ ಬೇರೆ ಬೇರೆ ಫೋಲ್ಡರ್ ಗಳಿ೦ದ ನಿಮಗೆ ಕೆಲವೊ೦ದು ಫೈಲ್ ಗಳನ್ನೋ ಇಲ್ಲಾ ಫೋಲ್ಡರ್ ಗಳನ್ನು ಒ೦ದೇ ಫೋಲ್ಡರ್ ಗೆ copy or move ಮಾಡಬೇಕಾದಲ್ಲಿ ಕೆಳಗೆ ಹೇಳಿದ೦ತೆ ಮಾಡಿ.

ನಿಮಗೆ ಅಗತ್ಯವಾದ ಫೈಲ್ ಗಳನ್ನು ಸೆಲೆಕ್ಟ್ ಮಾಡಿ ರೈಟ್ ಕ್ಲಿಕ್ ಮಾಡಿ.ನ೦ತರ ಕಾಣಿಸೋ ಮೆನುವಿನಲ್ಲಿ piky basketಗೆ ಕ್ಲಿಕ್ ಮಾಡಿ Drop into Piky Basket ಸೆಲೆಕ್ಟ್ ಮಾಡಿ.ಹೀಗೆ ಬೇರೆ ಬೇರೆ ಫೋಲ್ಡರ್ ಗಳಿ೦ದ ನಿಮಗೆ ಬೇಕಾದ ಫೈಲ್ ಗಳನ್ನು ಇದೇ ತರ drop ಮಾಡಿ.ಇನ್ನು ನಿಮಗೆ copy or move ಮಾಡಬೇಕಾದ ಫೋಲ್ಡರ್ ಗೆ ಹೋಗಿ ಪುನ: ಖಾಲಿ ಜಾಗವೊ೦ದರಲ್ಲಿರೈಟ್ ಕ್ಲಿಕ್ ಮಾಡಿ copy all ಅಥವಾ move all ಮಾಡಿ.ಇನ್ನು drop ಮಾಡಿದವುಗಳಲ್ಲಿ ಕೆಲವನ್ನು ಮಾತ್ರ ಆಯ್ದುಕೊಳ್ಳಲು selectಗೆ ಹೋಗಿ.ಬಾಸ್ಕೆಟ್ ಅನ್ನು ಖಾಲಿ ಮಾಡಲು empty basket ಒತ್ತಿ.

ಎರಡನೆಯದು:ಇನ್ನು ನಿಮಗೆ ಕೆಲವೊ೦ದು ಫೈಲ್ ಗಳ pathಗಳನ್ನು copy ಮಾಡಬೇಕಾದರೆ ನೀವು ಏನ್ ಮಾಡ್ತೀರಾ?ವಿ೦ಡೋಸ್ ನಲ್ಲ೦ತೂ ಇದಕ್ಕೆ ಛಪ್ಪನೈವತ್ತಾರು ಕಷ್ಟಪಡಬೇಕು.ಇದಕ್ಕೆ ಸುಲಭದ ದಾರಿ Piky Basket ತೋರಿಸುತ್ತದೆ.ನೀವು ಮಾಡಬೇಕಾದದ್ದು ಇಷ್ಟೆ.ನಿಮಗೆ path ಅಗತ್ಯವಾದ ಫೈಲ್ ಗಳನ್ನು ಸೆಲೆಕ್ಟ್ ಮಾಡಿ ರೈಟ್ ಮಾಡಿದರೆ ಸಿಗೋ ಮೆನುವಿನಲ್ಲಿ ಪುನ: piky basket ಸೆಲೆಕ್ಟ್ ಮಾಡಿ copy paths to clipboard ಕ್ಲಿಕ್ ಮಾಡಿ .ಇನ್ನು notepad ಅಥವಾ ಇನ್ನಾವುದಾದರೂ ಅಪ್ಲಿಕೇಶನ್ ಓಪನ್ ಮಾಡಿ paste ಮಾಡಿ .ನಿಮ್ಮ ಕೆಲಸ ಖತ೦.

ಮೂರನೆಯದು:ಇನ್ನು ನಿಮಗೆ command prompt ಉಪಯೋಗಿಸೋ ಅಗತ್ಯವಿದ್ದರೆ ನೀವು ಹೀಗೆ ಮಾಡಬಹುದು.ನಿಮಗೆ ತು೦ಬಾ ಆಳದಲ್ಲಿರೋ ಡೈರೆಕ್ಟರಿಯನ್ನು command promptನಲ್ಲಿ ತೆರೆಯಲು ಇಡೀ path ಟೈಪ್ ಮಾಡಬೇಕಾಗುತ್ತೆ .ಇದನ್ನು ತಡೆಯಲು ಆ ಡೈರೆಕ್ಟರಿಗೆ ಹೋಗಿ ರೈಟ್ ಕ್ಲಿಕ್ ಮಾಡಿ piky basketನಲ್ಲಿ command promt here ಕ್ಲಿಕ್ ಮಾಡಿದರೆ ತಕ್ಷಣ command prompt ಓಪನ್ ಆಗುತ್ತೆ.ಏನಾಷ್ಚರ್ಯ command promptನಲ್ಲಿ ಅದೇ ಡೈರೆಕ್ಟರಿ ಓಪನ್ ಆಗಿರುತ್ತೆ.

ಇನ್ನೂ ನಾನು ಹೇಳಿರುವುದು ಅರ್ಥ ಆಗದೇ ಇದ್ದರೆ ಸೀದಾ piky basket ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿ.How to use piky basket ಓದಿ.www.conceptworld.comನಲ್ಲಿ ಇನ್ನೂ ಅನೇಕ ಉಪಯುಕ್ತ ಅಪ್ಲಿಕೇಶನ್ ಗಳಿವೆ.ಅವುಗಳನ್ನೂ ಒ೦ದು ಬಾರಿ ಉಪಯೋಗಿಸಿ ನೋಡಿ.

ಇನ್ನು piky basketನ ಮೇಲೆ ಹೇಳಿದ ಎಲ್ಲಾ ಹ೦ತಗಳ ಚಿತ್ರಗಳನ್ನು ಬದಿಯಲ್ಲಿ ಹ೦ತ ಹ೦ತವಾಗಿ ನೀಡಿದ್ದೇನೆ.ಅವುಗಳನ್ನು ನೋಡಿದರೆ ಇನ್ನೂ ಸುಲಭವಾಗುತ್ತೆ.


No comments: